Mahesh C Arali
2 min readApr 7, 2020

ಸಾಮಾಜಿಕ ಸಾಮರಸ್ಯದ ಭದ್ರ ಬುನಾದಿಯಮೇಲೆ ನಾವು ಸಮೃದ್ಧ ಮತ್ತು ಮಾದರಿ ರಾಷ್ಟ್ರ ಕಟ್ಟಲು ಸಾಧ್ಯ!!

ಜಗತ್ತಿನ ಎಲ್ಲ ರಾಷ್ಟ್ರಗಳ್ಳಲ್ಲು ಮತ್ತು ಸಮುದಾಯಗಳಲ್ಲೂ ಪುಂಡರು, ಕಿಡಿಗೇಡಿಗಳು, ಮೂರ್ಖರು, ಕಳ್ಳರು ಮತ್ತು ಖದೀಮರು ಇದ್ದೇಇರುತ್ತಾರೆ.
ಹೀಗಾಗಿ ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಜೈಲುಗಳಿವೆ, ಕೈದಿಗಳಿದ್ದಾರೆ , ನ್ಯಾಯಾಲಯಗಳಿವೆ ಹಾಗು ಪೊಲೀಸರಿದ್ದಾರೆ.

ಕೆಲವಂದು ಪ್ರಾಂತದಲ್ಲಿ ಮತ್ತು ಸಮುದಾಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೆ ಕೆಲವಂದು ಸಮುದಾಯದಲ್ಲಿ ಕಡಿಮೆ ಸಂಖ್ಯೆಯಲ್ಲಿ ಇದ್ದಾರೆ. ಈ ಪರಸ್ಥತಿಯು ಶಾಶ್ವತವಲ್ಲ, ಇದರಲ್ಲಿ ನಿರಂತರ ಬದಲಾವಣೆಗಳು ಆಗುತ್ತಲೇ ಇರುತ್ತದೆ. ಸಮಾಜ ಶಿಕ್ಷಿತವಾದಲ್ಲಿ ಹಾಗು ವ್ಯವಸ್ಥೆ ಗಳು ಸದೃಡವಾದಲ್ಲಿ ಸಮಾಜದ ಏಳಿಗೆಯಾಗುತ್ತದೆ. ಸಮಾಜಕ್ಕೆ ತೊಂದರೆ ಕೊಡುವವರ ಸಂಖ್ಯೆ ಕಡಿಮೆಯಾಗುತ್ತದೆ ಹಾಗೆ ಜೈಲಿನಲ್ಲಿ ಇರುವವರ ಸಂಕ್ಯೆಕೂಡ ಕಡಿಮೆಯಾಗುತ್ತದೆ.

ನಾವು ಕೆಲವಂದು ಉಧಾರಣೆಗಳನ್ನು ನೋಡಿ ಇಡೀ ಸಮುದಾಯವನ್ನೇ ದೊಷಿಸುವದು ತಪ್ಪಾಗುತ್ತದೆ. ಜಗತ್ತಿನ ಎಲ್ಲ ಧರ್ಮಗಳ ಸಾರ ಒಂದೇ , ಮಾನವಕುಲದ ರಕ್ಷಣೆ , ಶಾಂತಿ ಮತ್ತು ಏಳಿಗೆ. ಯಾವ ಧರ್ಮವು ಮನಕುಲಕ್ಕೆ ಕೇಡನ್ನು ಬಯಸುವದಿಲ್ಲ. ಕೆಲವಂದು ಸ್ವಾರ್ಥಿಗಳು ಧರ್ಮಗ್ರಂಥಗಳಲ್ಲಿ ಹೇಳಿದನ್ನು ತಿರುಚಿ ಸಮಾಜವನ್ನು ಅಡ್ಡ ದಾರಿಗೆ ಏಳಿದ ಹಲವಾರು ಉಧಾರಣೆಗಳಿವೆ ಜಗತ್ತಿನ ಎಲ್ಲ ಧರ್ಮಗಳಲ್ಲೂ ಮತ್ತು ಸಮುದಾಯಗಳಲ್ಲೂ. ಹಾಗಂತ ಧರ್ಮವನ್ನು ದೊಷಿಸುವದು ತಪ್ಪಾಗುತ್ತದೆ.

ನೀವು ಒಂದು ಜೀವವನ್ನು ಕಾಪಾಡಿದಲ್ಲಿ ಇಡಿ ಮನುಕುಲವನ್ನೇ ಕಾಪಾಡಿದಹಾಗೆ! — ಕುರಾನ (೫:೩೨)

ಅವನು ನನ್ನ ಬಂಧು, ಇವನು ಅಪರಿಚಿತ, ಅಂತ ಸಣ್ಣ ಮನಸ್ಸು ಹೇಳುತ್ತದೆ. ಇಡೀ ವಿಶ್ವವೇ ಒಂದು ಕುಟುಂಬಯೆನ್ನುವದು ಉದಾತ್ತ ಮನಸ್ಸು.- ಮಹಾ ಉಪನಿಷತ್ 6.71 — ೭೫ [೭] [೪].

ನೀವು ನಿಮ್ಮ ನೆರೆಯವರನ್ನು ನಿಮ್ಮನ್ನು ನೀವೇ ಪ್ರೀತಿಸುವಷ್ಟು ಪ್ರೀತಿಸಿ — ಬೈಬಲ್ ಮಾರ್ಕ್ (೧೨:೩೧)

ಭಾರತವು ವಿಶ್ವಕ್ಕೆ ಮಾದರಿ ರಾಷ್ಟ್ರವಾಗಬೇಕಾದರೆ ನಮ್ಮಲಿ ಎಲ್ಲ ಸಮುದಾಯಗಳಲ್ಲಿ ಪರಸ್ಪರ ಗೌರವ ಇರಬೇಕು. ಮೇಲು ಕೀಳೆಂಬ ಭಾವನೆಗಳು ತೊಲಗಬೇಕು. ಇನ್ನೊಂದು ಧರ್ಮವನ್ನು ಜರಿದು ಆಗುವ ಧರ್ಮ ಪ್ರಚಾರ ಮತ್ತು ಮಂತಾಂತರ ನಿಲ್ಲಬೇಕು. ಯಾರಾದರೂ ಸ್ವಇಚ್ಛೆಯಿಂದ ಮತಾಂತರ ಬಯಸಿದಲ್ಲಿ ಅವರಿಗೆ ಯಾವ ಅಡ್ಡಿಯಾಗಬಾರದು. ಸಾಮಾಜಿಕ ಸಾಮರಸ್ಯದ ಭದ್ರ ಬುನಾದಿಯಮೇಲೆ ನಾವು ಸಮೃದ್ಧ ಮತ್ತು ಮಾದರಿ ರಾಷ್ಟ್ರ ಕಟ್ಟಲು ಸಾಧ್ಯ.

ಈ ಕಠಿಣ ಪರಸ್ಥಿತಿಯಲ್ಲಿ ಯಾರಾದರೂ ಧರ್ಮವನ್ನು ದುರುಪಯೋಗ ಪಡಿಸಿಕೊಂಡು ಸಮಾಜವನ್ನು ಅಡ್ಡದಾರಿಗೆ ಎಳೆಯಲು ಪ್ರಯತ್ನಿಸಿದಲ್ಲಿ ಅವರಬಗ್ಗೆ ಪೊಲೀಸ ಇಲಾಖೆಗೆ ದೋರು ನೀಡಿ. ಕಾನೂನನ್ನು ನಿಮ್ಮ ಕೈಗೆ ಎತ್ತೆಕೊಳ್ಳಬೇಡಿ , ಅದು ಮಹಾ ಅಪರಾಧವಾಗುತ್ತದೆ.

- ಮಹೇಶ ಅರಳಿ

Mahesh C Arali
Mahesh C Arali

Written by Mahesh C Arali

Passionate about improving overall quality of political organizations and politics in the country. Volunteer at BJP. Contributing to build IT solutions.

No responses yet